Posts

Showing posts with the label ICYM

ಸಂಪಿಗೆ ಯುವಮಿಲನ್ - 2024

Image
ಸಂಪಿಗೆ ಯುವಮಿಲನ್ - 2024 ಪವಿತ್ರಾತ್ಮರ ದೇವಾಲಯ, ಸಂಪಿಗೆ ಮತ್ತು ಐ.ಸಿ.ವೈ.ಎಮ್. ಸಂಪಿಗೆ ಘಟಕ ಇದರ ಸಹಯೋಗದೊಂದಿಗೆ  "ಸಂಪಿಗೆ ಯುವ ಮಿಲನ್ 2024" ನ್ನು ಭಾನುವಾರ, ಆಗಸ್ಟ್‌ 4, 2024 ರಂದು ಸಂಪಿಗೆ ಸಭಾ ಭವನದಲ್ಲಿ ಆಯೋಜಿಸಿತು.  ಕಾರ್ಯಕ್ರಮವು ಬೆಳಿಗ್ಗೆ 10:00 ಗಂಟೆಗೆ ಪ್ರಾರ್ಥನಾ ಗೀತೆಯೊಂದಿಗೆ ಪ್ರಾರಂಭವಾಯಿತು. ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಐ.ಸಿ.ವೈ.ಎಮ್. ಕೇಂದ್ರೀಯ ಸಮಿತಿಯ ನಿರ್ದೇಶಕರಾದ ವಂದನೀಯ ಫಾದರ್ ಅಶ್ವಿನ್ ಕಾರ್ಡೋಜಾ, ಸಂಪಿಗೆ ಚರ್ಚ್'ನ ಧರ್ಮ ಗುರುಗಳಾದ ವಂದನೀಯ ಫಾದರ್ ವಿನ್ಸೆಂಟ್ ಡಿಸೋಜಾ, ಐ.ಸಿ.ವೈ.ಎಮ್. ಕೇಂದ್ರೀಯ ಸಮಿತಿಯ ಕೋಶಾಧಿಕಾರಿಯಾದ ರೀನಾ ಕ್ರಾಸ್ತಾ, ಐ.ಸಿ.ವೈ.ಎಮ್. ಮೂಡಬಿದ್ರಿ ವಲಯದ ಅಧ್ಯಕ್ಷರಾದ ಜೆವಿನ್ ಡಿಸೋಜಾ, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ವಿಲ್ಫ್ರೇಡ್ ಮಿಸ್ಕಿತ್, ಕಾರ್ಯದರ್ಶಿ ರೋಶನ್ ಫೆರ್ನಾಂಡಿಸ್, ಐ.ಸಿ.ವೈ.ಎಮ್. ಸಂಪಿಗೆ ಘಟಕದ ಅಧ್ಯಕ್ಷ ಮೆಲ್ರೋಯ್ ಮೋರಾಸ್, ಐ.ಸಿ.ವೈ.ಎಮ್. ಸಂಪಿಗೆ ಘಟಕದ ಸಚೇತಕರಾದ ವಿಪಿನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಐ.ಸಿ.ವೈ.ಎಮ್. ಸಂಪಿಗೆ ಘಟಕದ ಉಪಾಧ್ಯಕ್ಷೆ ಜೋಯ್ಲಿನ್ ಕೊರ್ಡೆರೋ ಮುಖ್ಯ ಅತಿಥಿಗಳನ್ನು ಸ್ವಾಗತಿಸಿದರು ಐ.ಸಿ.ವೈ.ಎಮ್. ಸಂಪಿಗೆ ಘಟಕದ ಸಾಂಸ್ಕ್ರತಿಕ ಕಾರ್ಯದರ್ಶಿ ನೀಶಲ್ ಡಿಸಿಲ್ವ ಕಾರ್ಯಕ್ರಮವನ್ನು ನಿರೂಪಿಸಿ ವಂದನೆ ಸಲ್ಲಿಸಿದರು. 50 ಕ್ಕೂ ಹೆಚ್ಚು ಉತ್ಸಾಹಿ ಯುವಜನರನ್ನು ಸೆಳೆಯುವ ಮೂಲಕ "ಸಂಪಿಗೆ ಯು...