ಪಾವ್ಸಾ ಗಮ್ಮತ್ತ್ - 2024
ಐ.ಸಿ.ವೈ.ಎಮ್. ಸಂಪಿಗೆ ಘಟಕದ ವತಿಯಿಂದ ‘ಪಾವ್ಸಾ ಗಮ್ಮತ್ತ್’ ಎಂಬ ಮಳೆಗಾಲದ ಆಹಾರ ಪದಾರ್ಥಗಳ ವಿಶಿಷ್ಟ ಕಾರ್ಯಕ್ರಮ ಐ.ಸಿ.ವೈ.ಎಮ್. ಸಂಪಿಗೆ ಘಟಕದ ವತಿಯಿಂದ ‘ಪಾವ್ಸಾ ಗಮ್ಮತ್ತ್’ ಎಂಬ ಕಾರ್ಯಕ್ರಮವನ್ನು ಹೋಲಿ ಸ್ಪಿರಿಟ್ ಚರ್ಚ್ ಸಂಪಿಗೆ ಇಲ್ಲಿನ ಸಭಾಂಗಣದಲ್ಲಿ ಜುಲೈ 21, 2024 ರಂದು ಮಧ್ಯಾಹ್ನ 12 ಗಂಟೆಗೆ ಅಧ್ಬುತವಾಗಿ ಆಯೋಜಿಸಲಾಗಿತು. ಮುಖ್ಯ ಅತಿಥಿಗಳನ್ನು ಐ.ಸಿ.ವೈ.ಎಮ್. ಸಂಪಿಗೆ ಘಟಕದ ಅಧ್ಯಕ್ಷ ಮೆಲ್ರೋಯ್ ಮೋರಾಸ್ ವೇದಿಕೆಗೆ ಕರೆದೊಯ್ದರು. ವೇದಿಕೆಯಲ್ಲಿ ಸಂಪಿಗೆ ಚರ್ಚ್'ನ ಧರ್ಮ ಗುರುಗಳಾದ ವಂದನೀಯ ಸ್ವಾಮಿ ವಿನ್ಸೆಂಟ್ ಡಿಸೋಜಾ, ಐ.ಸಿ.ವೈ.ಎಮ್. ಮೂಡಬಿದ್ರಿ ವಲಯದ ಉಪಾಧ್ಯಕ್ಷರಾದ ರೊಲ್ಸನ್ ರೊಡ್ರಿಗಸ್, ಚರ್ಚ್ ಪಾಲನಾ ಸಮಿತಿಯ ಉಪಾಧ್ಯಕ್ಷರಾದ ವಿಲ್ಫ್ರೇಡ್ ಮಿಸ್ಕಿತ್, ಕಾರ್ಯದರ್ಶಿ ರೋಶನ್ ಫೆರ್ನಾಂಡಿಸ್, ಐ.ಸಿ.ವೈ.ಎಮ್. ಸಂಪಿಗೆ ಘಟಕದ ಅಧ್ಯಕ್ಷ ಮೆಲ್ರೋಯ್ ಮೋರಾಸ್, ಐ.ಸಿ.ವೈ.ಎಮ್. ಸಂಪಿಗೆ ಘಟಕದ ಸಚೇತಕರಾದ ವಿಪಿನ್ ಫೆರ್ನಾಂಡಿಸ್ ಉಪಸ್ಥಿತರಿದ್ದರು. ಐ.ಸಿ.ವೈ.ಎಮ್. ಸಂಪಿಗೆ ಘಟಕದ ಉಪಾಧ್ಯಕ್ಷೆ ಜೋಯ್ಲಿನ್ ಕೊರ್ಡೆರೋ ಮತ್ತು ಪಂಗಡದಿಂದ ಪ್ರಾರ್ಥನಾ ಗೀತೆಯ ಮೂಲಕ ಕಾರ್ಯಕ್ರಮ ಪ್ರಾರಂಭವಾಯಿತು. ಐ.ಸಿ.ವೈ.ಎಮ್. ಸಂಪಿಗೆ ಘಟಕದ ಖಜಾಂಜಿ ಕ್ಲೇರಿ ಫೆರ್ನಾಂಡಿಸ್ ಅತಿಥಿಗಳನ್ನು ಸ್ವಾಗತಿಸಿದರು ಧರ್ಮ ಗುರುಗಳು ಪಾವ್ಸಾ ಗಮ್ಮತ್ತ್ ಮತ್ತು ಅದಕ್ಕೆ ಸಂಬಂಧಿಸಿದ ಸಂಪ್ರದಾಯದ ಮಹತ್ವದ ಬಗ್ಗೆ ಮಾತನಾಡಿ ಇಂತಹ ವಿಶಿಷ್ಟ ಮತ್ತು...