ಪಹಣಿಗೆ ಆಧಾರ್ ಜೋಡಣೆ ಕಾರ್ಯಕ್ರಮ
ಕಥೊಲಿಕ್ ಸಭಾ (ರಿ) ಸಂಪಿಗೆ ಘಟಕದ ವತಿಯಿಂದ ಪಹಣಿಗೆ ಆಧಾರ್ ಜೋಡಣೆ ಕಾರ್ಯಕ್ರಮ ದಿನಾಂಕ 17/07/2024 ರಂದು ಸಂಪಿಗೆ ಚರ್ಚ್ ವತಿಯಿಂದ ನಡೆಯಿತು. ಪುತ್ತಿಗೆ, ಕಲ್ಲಮುಂಡ್ಕೂರು, ತೆಂಕಮಿಜಾರು ಹಾಗೂ ಬಡಗಮಿಜಾರು ಗ್ರಾಮದ ಗ್ರಾಮಸ್ಥರು ಇದರ ಸದುಪಯೋಗವನ್ನು ಪಡೆದುಕೊಂಡರು. ಪುತ್ತಿಗೆ ಗ್ರಾಮದ ಗ್ರಯ ಸಹಾಯಕರಾದ ಕೇಶವ, ಬಡಗಮಿಜಾರು ಗ್ರಾಮದ ಚಂದ್ರು ದೇವಾಡಿಗ, ತೆಂಕಮಿಜಾರು ಗ್ರಾಮದ ಹರ್ಷಿತಾ ಮತ್ತು ಕಲ್ಲಮುಂಡ್ಕೂರು ಗ್ರಾಮದ ಗ್ರಾಮ ಸಹಾಯಕರಾದ ತೋಮಸ್ ಕರ್ಡೋಜ ಇವರು ಹಾಜರಿದ್ದರು. ಇವರನ್ನು ಕಥೊಲಿಕ್ ಸಭಾ (ರಿ) ಸಂಪಿಗೆ ಘಟಕದ ವತಿಯಿಂದ ಸನ್ಮಿನಿಸಲಾಯಿತು.